ಹರಿ ನಿಮ್ಮ ಪದಕಮಲ ನಿರುತ ಧ್ಯಾನದಿ
Category: ಶ್ರೀಕೃಷ್ಣ
Author: ಕನಕದಾಸ
ಹರಿ ನಿಮ್ಮ ಪದಕಮಲ ನಿರುತ ಧ್ಯಾನದಿ ಎನಗೆದೊರಕಿತೀ ಗುರುಸೇವೆ ಹರಿಯೆ
ಗುರುಮಂತ್ರ ಮೂಲ ಸದ್ಗುರು ಮೂರ್ತಿ ನೀನಾಗಿಕರೆಯ ಸೇರಿಸಿದೆ ಶ್ರೀಹರಿಯೆ
ಮೊದಲು ನಿಮ್ಮುಪದೇಶ ನದರು ಮಾಡದೆ ಇರಲುಅದನೆಲ್ಲ ಮನ್ನಿಸಿದೆ ಹರಿಯೆಮುದದಿಂದ ನೀ ಬಂದು ಭವ ಬಂಧನವ ಬಿಡಿಸಿಹದನಕ್ಕೆ ನಿಲ್ಲಿಸಿದೆ ಹರಿಯೆ ||1||
ದೊರೆತನವ ಬಿಡಿಸಿ ಸುಸ್ಥಿರ ಮಾರ್ಗ ತೋರಿಸಿದೆನರಮಾತ್ರದವನೆನದೆ ಹರಿಯೆಗರುವದೊಳಗಿಹನೆಂದು ಅರಿತು ತವದಾಸರಿಗೆಇರದೆ ಅಡಿಯಾಗಿಸಿದೆ ಹರಿಯೆ ||2||
ಕನಕ ದಳದಲಿ ಬಂದು ಕಲೆತನೆಂದರೆ ಫೌಜುಕನುಕುಮನುಕಾಗುವುದು ಹರಿಯೆಮೊನೆಗಾರತನವೆಂಬ ಶನಿ ಬಿಡಿಸಿ ತವಪಾದವನಜವನು ಸೇರಿಸಿದೆ ಹರಿಯೆ ||3||
ಮನದೊಳಗೆ ಎರಡಿಲ್ಲ ಮದದಾನೆ ಮೇಲ್ಕಡಿವಮನವ ಹಿಮ್ಮೆಟ್ಟಿಸಿದೆ ಹರಿಯೆಘನವು ತಾಮಸಾಹಂಕಾರ ದುರ್ಮತಿ ದುರಿತಕನಜವನು ಕಿತ್ತೆಸೆದೆ ಹರಿಯೆ||4||
ಮದರೂಪು ಬಿಡಿಸಿ ಸನ್ಮುದ ರೂಪು ಧರಿಸೆಂದುಹೃದಯದೊಳು ನೀ ನಿಂತೆ ಹರಿಯೆಇದು ರಹಸ್ಯವು ಎಂದು ಹಿತವ ಬೋಧಿಸಿ ಎನಗೆಬದುಕಿಸಿದೆ ಬದುಕಿದೆನು ಹರಿಯೆ||5||
ದುರದಲ್ಲಿ ನಾಲ್ಕು ದಿಕ್ಕಲಿ ಹೊಕ್ಕು ಹೊಳೆವಂಥಬಿರುದು ಬಿಂಕವ ಕಳೆದೆ ಹರಿಯೆಪರಬಲವ ಕಂಡರೆ ಉರಿದು ಬೆಂಕಿಯಹ ಮನವಸೆರೆ ಹಾಕಿ ನಿಲ್ಲಿಸಿದೆ ಹರಿಯೆ||6||
ಪರಮ ಮೂರ್ಖನು ನಾನು ವರ ವೀರ ವೈಷ್ಣವರಚರಣವನು ಸೇರಿಸಿದೆ ಹರಿಯೆಕರೆ ಕಳಿಸಿ ಎನ್ನಲ್ಲಿ ಅಳವಿಲ್ಲದಿಹ ನಾಮಸ್ಮರಣೆ ಜಿಹ್ವೆಗೆ ಬರೆದೆ ಹರಿಯೆ|| 7||
ಸ್ವಾರಿ ಹೊರಡಲು ಛತ್ರ ಭೇರಿ ನಿಸ್ಸಾಳಗಳುಭೋರೆಂಬ ಭೋಂಕಾಳೆ ಹರಿಯೆಧೀರ ರಾಹುತರಾಣ್ಯ ಭಾರಿ ಪರಿವಾರದಹಂ-ಕಾರ ಭಾರವ ತೊರೆದೆ ಹರಿಯೆ||8||
ನೀರ ಸಂಗವ ಬಿಟ್ಟು ಆಣಿ ಮುತ್ತಾದಂತೆಸೇರಿಸಿದೆ ತವ ಪಾದ ಹರಿಯೆಆರಿಗಂಜೆನು ನಾನು ಅಧಿಕಪುರಿ ಕಾಗಿನೆಲೆಸಿರಿಯಾದಿಕೇಶವ ದೊರೆಯೆ ||9||