ಅಂಗಿ ಕೊತ್ತೇನೆ ಗೋಪಿ

Category: ಶ್ರೀಕೃಷ್ಣ

Author: ವಿಜಯದಾಸ

ಅಂಗಿ ಕೊತ್ತೇನೆ | ಗೋಪಿ | ತಿಂಗಲವಾದೇನೆ |
ತಿಂಗಾದಿ ಪಿದಿದೆನು ಸಲಸಲ ಪೋಗಿ |
ಗಂಗಿಯ ತಿದೆಯಲ್ಲಿ ಆದಿ ಬಂದೇನು
ಕುಕುಕೊಲ್ಲೆ | ತಾಯಿಹಾಲು ಕುದಿದೇನು |
ಗೋಕುಲ ಮಕ್ಕಳ ಕೂದಾ ಕಲಿತು |
ಕಾಕಾಕೋಲು ಹೊದಾದೆನೆ ||1||

ತಂದು ಕೊದು ಬ್ಯಾಗಾ ಕೈಗೆ ಚಿನ್ನಿಕೋಲು ಬೇಕಲ್ಲೆ |
ಉಂದೇನು ಕಲ್ಲಿಯ ಬುತ್ತಿಯ ಮತ್ತೆ |
ಹಿಂದಾಕಲುಗಳ ಕಾದು ತಂದೆನೊ ||2||

ಅಪ್ಪತ್ತಿಕೊದು ಒಂದು ಮ್ಯಾಲೆ ತುಪ್ಪವು ತೊದಿಯದಕೆ |
ತಪ್ಪಿಗೆಯಿದಸೆ ಅಪ್ಪಗೆ ಪೇಳಿ
ವಪ್ಪುಗದಲಿ ವುದಿಕಲಿ ಕತ್ತೆ ||3||

ಅಮ್ಮ ನೀ ತಿಂದೆನೆ ಯಿತ್ತು ಯೆಂಣೆ ಮೆದ್ದೆನೆ |
ವಮ್ಮೆ ತತಕು ಮೊಸಲು ಸುರಿದೇನು |
ತಮ್ಮನ ತೊತ್ತಿಯಿಂದಾ ಯಿಲೆಸೆ ||4||

ಈ ಲೀಲೆಯ ನೋಡಿ ಮಗನ ತೋಳಲಿ ಬಿಗಿದಪ್ಪಿ |
ಮೂಲೋಕದರಸ ವಿಜಯವಿಠ್ಠಲ
ಆಲಯ ಪಾವನವೆಂದಳೆ ಗೋಪಿ ||5||