ತಾಯಿ ನೀನೆನ್ನ ಶಿಕ್ಷಿಸಲು
Category: ಶ್ರೀದೇವಿ
Author: ಸ್ವಾಮಿ ಹರ್ಷಾನಂದ
ತಾಯಿ ನೀನೆನ್ನ ಶಿಕ್ಷಿಸಲು
ರಕ್ಷಿಪರಾರು ತ್ರಿಭುವನದೊಳು ಹೇ ||
ನಿನ್ನನೆ ನಂಬಿಯೆ ಅನ್ಯರ ತ್ಯಜಿಸಿದೆ
ನೀಯೆನ್ನ ತ್ಯಜಿಸಲು ಗತಿ ಯಾರಿನ್ನು ||
ಮಾನುಷ ಜನ್ಮವ ಮುಕ್ತಿಯ ಆಸೆಯ
ಶ್ರೀಗುರುಪಾದವ ಕರುಣಿಸಿದೆ ತಾಯಿ |
ಎನ್ನಯ ದೋಣಿಯ ನಿನ್ನಯ ದಡದಲಿ
ಮುಳುಗಿಸಿದರೇ ನೀನೇ ಕಾಯುವರಾರು
ಕಾಯುವರಾರು ಜಗಜ್ಜನನಿ ||