ದಯಮಾಡಿಸು

Category: ಶ್ರೀದೇವಿ

Author: ವಚನವೇದ

ದಯಮಾಡಿಸು ದಯಮಾಡಿಸು ಹೃದಯಕಮಲಪೀಠದಿ |
ಬಂದು ಮೊಗವ ತೋರು ತಾಯೆ ಹೃದಯ ಪ್ರಾಣ ಪುತ್ಥಲೀ ||

ಹುಟ್ಟಿದಂದಿನಿಂದ ನಾನು ಎನಿತೊ ನೋವ ನುಂಗಿದೆ |
ನೀನು ಬಲ್ಲೆ ನಿನ್ನ ಬರವಿಗಾಗಿ ನಾನು ಕಾದಿಹೆ |

ಹೃದಯಕಮಲವರಳಿಸಿ ನೀ ದಯಮಾಡಿಸು ಬೇಗನೆ ||