ದಯಮಾಡೋ ರಂಗಾ
Category: ಶ್ರೀಕೃಷ್ಣ
Author: ಪುರಂದರದಾಸ
ದಯಮಾಡೋ ರಂಗಾ ದಯಮಾಡೋ ಕೃಷ್ಣ
ದಯಮಾಡೋ ನಿನ್ನ ದಾಸ ನಾನೆಂದು ||
ಹಲವು ಕಾಲದಿ ನಿನ್ನ ಹಂಬಲು ಎನಗೆ |
ಒಲಿದು ಪಾಲಿಸಬೇಕೊ ವಾರಿಜನಾಭ ||
ಇಹಪರಗತಿ ನೀನೆ ಇಂದಿರಾರಮಣ |
ಸಹಾಯ ನಿನ್ನದೇ ಸದಾ ತೋರು ಕರುಣಾ ||
ಕರಿರಾಜವರದನೆ ಕಂದರ್ಪನಯನ |
ಹರಿ ಸಾರ್ವಭೌಮ ಶ್ರೀ ಪುರಂದರವಿಟ್ಠಲ ||