ಈತನೀಗ ವಿಜಯ ವಿಠ್ಠಲಾ

Category: ಶ್ರೀಕೃಷ್ಣ

Author: ವಿಜಯದಾಸ

ಈತನೀಗ ವಿಜಯ ವಿಠ್ಠಲಾ
ಈತಜ್ಞಾನೀಗ ವಿಜಯ ವಿಠ್ಠಲಾ
ಮಾತು ಮಾತಿಗೆ ನೆನಸಿದವರ
ಪಾತಕಗಳ ಪರಿದು ಯಮನ
ಯಾತನೆಯನು ಕಳೆದು ಪೊರೆವಾ

ಕರೆದರೊಂದೆ ನುಡಿಗೆ ಬಂದು
ಕರುಣದಿಂದ ಮುಂದೆ ನಿಂದು
ಕರವ ಪಿಡಿದು ಅಂದು ಅಭಯ
ಕರವ ಪಾಲಿಸಿದ ದಯಾಸಿಂಧು
ಪರಿಪರಿಯಿಂದಲಿ ಹಿಂದು ಮುಂದು
ದುರಿತದಿಂದ ನೊಂದು ಬಂದು
ಇರಲು ದಾಸರ ದಾಸರನೆಂದು
ಮೊರೆ ವಿಚಾರಿಸಿ ಸಾಕಿದನಿಂದು ||1||

ಅಚ್ಯುತಾನಂತನೆಂಬ ನಾಮಾ
ಅಚ್ಚು ಸುಧೆಯೆನಗೆ ನೇಮಾ
ನಿಚ್ಚ ಉಣಲಿಕಿತ್ತ ಪ್ರೇಮಾ
ಚಚ್ಚಲದಲಿ ಪೂರ್ಣಕಾಮಾ
ಹೆಚ್ಚಿ ಬಪ್ಪ ಮದದಾ ಸ್ತೋಮಾ
ನುಚ್ಚು ಮಾಡಿ ಬಿಡುವ ಭೀಮಾ
ನಿಚ್ಚ ಮನದ ಕುಮುದ ಸೋಮಾ
ಸುಚ್ಚರಿತ ಸಾರ್ವಭೌಮಾ||2||

ಮೊದಲೆ ಗುರು ಪುರಂದರದಾಸರಾ
ಹೃದಯದೊಳಗೆ ನಿಂದಾ ಶೃಂಗಾರಾ
ಉದಧಿಯೋ ಇದು ಬಣ್ಣಿಸಿಬಲ್ಲ್ಲಿರಾ
ತ್ರಿದಶರೊಳಗೆ ಕಾಣೆ ಜ್ಞಾನರ
ಸದಮಲಾನಂದ ಪೂರ್ಣ ಇಂದಿರಾ
ಸದನಾ ಪ್ರತಾಪಗುಣ ಪಾರಾವಾರಾ
ಚದುರ ವಿಜಯವಿಠ್ಠಲ ಗಂಭೀರಾ
ಪದೋಪದಿಗೆ ಎನ್ನಯ ಮನೋಹರಾ||3||