ಅಂಜಿಕಿನ್ಯಾತಕ್ಕಯ್ಯಾ

Category: ಶ್ರೀಗುರು

Author: ಪುರಂದರದಾಸ

ಅಂಜಿಕಿನ್ಯಾತಕ್ಕಯ್ಯಾ ಸಜ್ಜನರಿಗೆ
ಅಂಜಿಕಿನ್ಯಾತಕ್ಕಯ್ಯಾ ||

ಸಂಜೀವರಾಯರ ಸ್ಮರಣೆಮಾಡಿದಮೇಲೆ ||

ಕನಸಲಿ ಮನದಲಿ ಕಳವಳವಾದರೆ
ಹನುಮನ ನೆನೆೆದರೆ ಹಾರಿಹೋಗದೆ ಪಾಪ ||

ರೋಮರೋಮಕೆ ಕೋಟಿ ಲಿಂಗವುದುರಿಸಿದ
ಭೀಮನ ನೆನೆದರೆ ಬಿಟ್ಟುಹೋಗದೆ ಪಾಪ ||

ಪುರಂದರವಿಟ್ಠಲ ಪೂಜೆಯ ಮಾಡುವ
ಗುರು ಮಧ್ವರಾಯರ ಸ್ಮರಣೆಮಾಡಿದಮೇಲೆ ||