ದರುಶನ ನೀಡೆನಗೆ ತಾಯಿ
Category: ಶ್ರೀಶಾರದಾದೇವಿ
Author: ಸ್ವಾಮಿ ಹರ್ಷಾನಂದ
ದರುಶನ ನೀಡೆನಗೆ ತಾಯಿ |
ಶಾರದೇಶ್ವರಿ ವರದೇ ಶುಭದೇ ॥
ದೀನೋದ್ಧರಣಕೆ ನಿನ್ನವತರಣ |
ನನಗೇ ಏಕೀ ದೂರೀಕರಣ ||
ದಿನಗಳು ಉರುಳಲು ಆಯುರ್ನಾಶ |
ನನ್ನಿಯ ತ್ಯಜಿಸಲು ತಾಪದ ಪಾಶ ||
ಜ್ಞಾನದಿಂ ಭಕ್ತಿಯಿಂ ಮೋಕ್ಷವು ಬಪ್ಪುದೆ |
ನಿನ್ನಯ ಪಾದದಿ ಶರಣವೆ ಸಾಲದೆ ||
ಎಂದಾಗುವುದು ಜನನಿ ಕೃಪೆಯು
ಅಂದೇ ನನಗೆ ವಿಮೋಚನೆಯು ||