ಎಂತು ವರ್ಣಿಪೆ ನಮ್ಮಮ್ಮಾ
Category: ಶ್ರೀಹನುಮಂತ
Author: ವಿಜಯದಾಸ
ಎಂತು ವರ್ಣಿಪೆ ನಮ್ಮಮ್ಮಾ |
ಯಂತ್ರೋದ್ಧಾರಕನಾಗಿ ಮೆರೆವನಾ
ಕೋತಿ ರೂಪದಲಿ ಬಂದು |
ಭೂತಳಕೆ ಬೆಡಗು ತೋರಿ ||
ಈ ತುಂಗಭದ್ರೆಯಲ್ಲಿ |
ಖ್ಯಾತಿಯಾಗಿಪ್ಪ ಯತಿಯಾ||1||
ಸುತ್ತಲು ವಾನರ ಬದ್ಧ |
ಮತ್ತೆ ವಲಯಾಕಾರ ಮಧ್ಯ ||
ಚಿತ್ರಕೋಣ ಅದರೊಳು |
ನಿತ್ಯದಲಿಯಿಪ್ಪ ಯತಿಯಾ ||2||
ವ್ಯಾಸ ಮುನಿರಾಯರಿಂದ |
ಈ ಶಿಲೆಯೊಳಗೆ ನಿಂದು ||
ಶ್ರೀಶ ವಿಜಯವಿಠ್ಠಲನ್ನ |
ಏಸು ಬಗೆ ತುತಿಪನ್ನ ||3||