ದೇವಕಿನಂದನ ಹರಿ
Category: ಶ್ರೀಕೃಷ್ಣ
Author: ಪುರಂದರದಾಸ
ದೇವಕೀನಂದನ ಹರಿ ವಾಸುದೇವ ||
ಕಂಸಮರ್ದನ ಹರಿ ಕೌಸ್ತುಭಾಭರಣ
ಹಂಸವಾಹನಮುಖವಂದಿತಚರಣ ||
ಶಂಖಚಕ್ರಧರ ಶ್ರೀಗೋವಿಂದ
ಪಂಕಜಲೋಚನ ಪೂರ್ಣಾನಂದ|
ಮಕರಕುಂಡಲಧರ ಶತರವಿಭಾಸ
ರುಕ್ಮಿಣಿವಲ್ಲಭ ಸಕಲಲೋಕೇಶ ||
ನಿಗಮೋದ್ದಾರ ನವನೀತಚೋರ
ಖಗಪತಿವಾಹನ ಜಗದಾಧಾರ |
ವರವೇಲಾಪುರ ಚನ್ನಪ್ರಸನ್ನ
ಪುರಂದರವಿಟ್ಠಲ ಸದ್ಗುಣಪೂರ್ಣ ||