ದೇವನೆ ಎನ್ನನು ಮರೆಯುವುದುಚಿತವೆ
Category: ವೈರಾಗ್ಯ
Author: ಸ್ವಾಮಿ ಹರ್ಷಾನಂದ
ದೇವನೆ ಎನ್ನನು ಮರೆಯುವುದುಚಿತವೆ
ಸೇವೆಯ ಮಾಡುತ ಬಾಳನು ಸವೆಸಿಹೆ ||
ಪೂರ್ವದ ಜನ್ಮದ ಸುಕೃತ್ಯದಿಂದಲೆ
ಗುರುವಿನನುಗ್ರಹ ಪಡೆದೆನು ಆಗಲೆ ||
ಕೊರಗುತ ಹೃದಯದಿ ಪರಿಪರಿಯಿಂದಲಿ
ಶಿರವನು ಬಾಗಿಸಿ ಬೇಡುತಲಿರುವೆ ||
ಮನದಲಿ ಮುಸುಕಿದ ತಮವನು ದೂಡೋ
ಮನುಕುಲಪಾವನ ದರುಶನ ನೀಡೋ ||