ಕೂಗಿತು ತಾಮ್ರದ ಚೂಡ

Category: ಶ್ರೀಕೃಷ್ಣ

Author: ವಿಜಯದಾಸ

ಕೂಗಿತು ತಾಮ್ರದ ಚೂಡ
ಕ್ಷೀರಸಾಗರಶಯನನಲ್ಲದಿಲ್ಲಹ ಪರ ಇಲ್ಲ್ಲೆಂದು
ಪಕ್ಕಗಳೆರಡು ಚಪ್ಪರಿಸಿ ಡಂಗುರುವ ಹೊಯ್ಯೆ
ಸೂಕ್ಕಿದವರ ಎದೆ ಜರ್ಝರಿಸೆ
ರೆಕ್ಕಿಯ ಮುಖವೆತ್ತಿ ಹರಿಸರ್ವೋತ್ತಮನೆಂದು
ಕೊಕ್ಕಟೆ ಕೊಕ್ಕಟೆ ಕೊಕ್ಕಟ್ಟೆ ಕೋ ಎಂದು||1||

ಒಂದು ಝಾವದಿ ಓಂಕಾರನೆಂದು ಕೂಗೆ
ಇಂದಿರಾಪತಿ ವಿಧಿಜನಕನೆಂದೂ
ಸಂದೇಹಪಡಬೇಡಿ ಸಕಲಾಂತರ್ಯಾಮಿ ಶ್ರೀ
ಬಿಂದುಮಾಧವನಲ್ಲದಿಹಪರವಿಲ್ಲವೆಂದು ||2||

ಎರಡು ಝಾವದಿ ಪುರುಷೋತ್ತಮನೆಂದು
ಗರುಡಾಚಲ ನರಸಿಂಹನೆಂದು
ಮೂರನೆ ಝಾವಕ್ಕೆ ವೀರನಾರಾಯಣ
ಹರಿಗಯಾಗದಾಧರನಲ್ಲದಿಲ್ಲವೆಂದು||3||

ನಾಲ್ಕನೆ ಝಾವದಲಿ ಬದರಿವರನಿಲಯ
ಏಕೋ ನಾರಾಯಣ ದೇವನೆಂದು
ಶ್ರೀ ಕಂಚಿವರದನೆ ಐದನೆ ಝಾವಕ್ಕೆ
ಗೋಕುಲಪತಿಯಲ್ಲದಿಹಪರ ಇಲ್ಲವೆಂದು ||4||

ಯಾಮ ಆರರೊಳು ವ್ಯಾಸಮೂರ್ತಿ ಎಂದು
ರೋಮಕೋಟಿ ಬ್ರಹ್ಮರುದ್ರರೆಂದು
ಸಾಮಗಾಯನ ಕಾವೇರಿ ರಂಗೇಶ
ಸ್ವಾಮಿ ಅಳಗಿರಿ ತಿಮ್ಮನಲ್ಲದಿಲ್ಲವೆಂದು ||5||

ಏಳು ಝಾವದಿ ವೇಣಿಮಾಧವನೆಂದು
ಮೇಲಗೋಟೆ ಚಳ್ಳಾಬಳ್ಳನೆಂದು
ಶ್ರೀಲೋಲ (ಆಯೋಧ್ಯಾ) ರಘುರಾಮ ಗಂಡಕಿ
ಸಾಲಿಗ್ರಾಮನಲ್ಲದಿಲ್ಲಹ ಪರ ಇಲ್ಲೆಂದು6
ಝಾವ ಎಂಟರೊಳು ಶ್ವೇತ ವರಾಹನೆಂದು
ಮಾವ ಮರ್ದನ ಜನಾದರ್ನನೆಂದು
ಶ್ರೀ ಉಡುಪಿಯ ಕೃಷ್ಣ ವಿಜಯವಿಠ್ಠಲ ತಿಮ್ಮ
ದೇವನಲ್ಲದೆ ಬೇರೆ ಇಹಪರ ಇಲ್ಲವೆಂದು ||7||