ಕೃಷ್ಣ ಕೃಷ್ಣ ಬಾಂಧವ
Category: ಶ್ರೀಕೃಷ್ಣ
Author: ವಿಜಯದಾಸ
ಕೃಷ್ಣ ಕೃಷ್ಣ ಬಾಂಧವ ಸೃಷ್ಟ್ಯಾದಷ್ಟ ಕರ್ತ
ದೃಷ್ಟನಾಮಕ ಭವ ನಷ್ಟವಗೈಸೋದು
ಅಷ್ಟರೊಳಗೆ ಹರಿ ವಿಷ್ಣು ಸರ್ವೋತ್ತಮ
ಇಷ್ಟೆ ಪೇಳುವದಕೆ ನಿಷ್ಟಿಯನೀಯೊ
ಈ ಸುದಿನವಾರಭ್ಯ ಕ್ಲೇಶದೊಳಗೆ ಬಿದ್ದಾ
ಯಾಸ ಬಡುತಲಿದ್ದೆ ಲೇಶವಾದರು ಸುಖ
ಲೇಶಗಾಣದಿರಲು ಏಸು ಜನ್ಮದ ಪುಣ್ಯ
ಸೂಸಿತೋ ನಿನ್ನಯ ದರುಶನ ಲಾಭವಾಗೆ
ದೇಶದೊಳಗೆ ನಿನ್ನ ದಾಸರ ದಾಸನೆನಿಸಿಕೊಂಬ
ಈ ಸುಲಭ ವೊಂದಿಸನುದಿನ ದು
ರಾಶೆಯ ಬಿಡಿಸೆಂದು
ನಾಶರಹಿತ ಗುಣರಾಶಿ ರಮೇಶ ||1||
ವೇದಪರಾಯಣ ಸಾಧುಗಳರಸಾ ವಿ
ನೋದಿಗಾ ಪಳ್ಳಿಗನೆ ಆದಿದೈವವೆ ತೀರ್ಥ
ಪಾದ ಜಗತ್ಯೆಂತ ಭೇದಾ ಶೃಂಗಾರ ವೇಣು
ನಾದ ಸನಕಾದಿ ಮುನಿವಂದಿತಾ
ಮಾಧವ ಮಹಿಧರ ಯಾದವ ಕರುಣ
ಯೋಧದಿ ಎನ್ನಪರಾಧವನೆಣಿಸದೆ
ಸಾಧನ ಕೆಡಿಸುವ ಕ್ರೋಧವ ಬಿಡಿಸಾರಾಧನೆ ತಿಳಿಯದು
ಭೂದೇವರೊಡಿಯಾ ||2||
ಕರವಾ ಬಿಡದಿರೆನ್ನ ಕರಣ ಶುದ್ಧವ ಮಾಡು
ಕರದ ಮಾತಿಗೆ ಭಯಂಕರವ ಓಡಿಸಿ ಮಂದ
ಕರಿಯ ಕಾಯಿದ ಶುಭಕರ ಕಾಳಿ ಮಥನ ಸಂ
ಕರ ಪಾಲಾ ನಿತ್ಯ ಚಾಮಿ ಕರ ರತುನ ಭೂಷಿತ
ಕರಡಿಸುತಿಯ ಪತಿ ಕರಸಿದ ಹರಿನಿಶಕರ
ಕುಲ ರತುನಾ ಕರಕೆ ಉಡುಪ ಮಕರಧ್ವಜಪಿತ
ಶಿರಿ ವಿಜಯವಿಠ್ಠಲ ಪದ ಕರದು
ತೋರಿಸೊ ಭಜಕರರೊಳಗಿಡುವುದು ||3||