ಕೃಷ್ಣನ್ನ ಬಲೂತ್ಕoಷ್ಟನ್ನ
Category: ಶ್ರೀಕೃಷ್ಣ
Author: ವಿಜಯದಾಸ
ಕೃಷ್ಣನ್ನ ಬಲೂತ್ಕøಷ್ಟನ್ನ ವಿಶಿಷ್ಟನ್ನ ಸ್ತುತಿಸಿ ತುಷ್ಟನ್ನ
ಗೋಪಳ್ಳಿಯೊಳಗಂದು ನಿಂದನ್ನಬಲುಗೋಪಿಯರ ಕೂಡ ನಂದನಾಗೋಪಿ ಚಂದನದಿಂದ ಬಂದನ್ನಾನಮ್ಮಗೋಪಾಲ ವಿಷ್ಣು ಗೋವಿಂದನ್ನ ||1||
ಅಪಾರ ಮಹಿಮ ನೆನೆಸುವನ್ನಾಭüಕುತ ಗಾಪತ್ತಬರಲು ಮಾಣಿಸುವನ್ನಾತಾಪಸಿಗಳಿಗೆ ಕಾಣಿಸುವನ್ನಾದಶರೂಪವ ಧರಿಸಿ ಜನಿಸುವನಾ ||2||
ರಜತಪೀಠ ಪುರವಾಸನ್ನಮಹರಜನೀಚರರ ವಿನಾಶನ್ನತ್ರಿಜಗದೊಳಗೆ ಪ್ರಕಾಶನ್ನನಮ್ಮವಿಜಯವಿಠ್ಠಲ ಮಾನಿಸನ್ನ ||3||