ಕೃಷ್ಣಾ ನಿನ್ನ ಕನಿಷ್ಟ ಪೊಳವ
Category: ಶ್ರೀಕೃಷ್ಣ
Author: ವಿಜಯದಾಸ
ಕೃಷ್ಣಾ ನಿನ್ನ ಕನಿಷ್ಟ ಪೊಳವ ವುಂ
ಗುಷ್ಟ ಭಜಿಸುವ
ನಿಷ್ಠ ಜನರ ಉಚ್ಚಿಷ್ಟ ಎನಗದು
ಮೃಷ್ಠಾನ್ನವಾಗಲಿಷ್ಟೇ ಬೇಡಿದೆನೊ
ನರಲೋಕದ ಸುಖ ಪರಿಪರಿಯಲ್ಲಿ
ಅರಿದೆನದರೊಳು
ಪರಮ ಸೌಖ್ಯ ಎಳ್ಳರೆ ಅನಿತಿಲ್ಲ
ಬರಿದೆ ಜನನ ಮರಣ ಪರಿಯಂತಾ
ಅರಸಿ ನೋಡಲು ದುರಿತ ವಾರುಧಿ
ಧರೆಯೊಳಗೆ ನಿಂದಿಸಲಾರೆ ಸಾಕು
ಶರಣು ಹೊಕ್ಕೆನು
ಕರುಣಪಾಂಗನೆ ಕರವಿಡಿದು ಸಲಹೋ ||1||
ಆವುದುಂಟದು ದೇವ ಮಾಣಿಸು
ಈ ವರವ ಕೊಂಡು ನಾ ಒಂದನು ವಲ್ಲೆ
ಭಾವಶುದ್ಧ ವಾಕ್ಯವೆ ನಿಶ್ಚಯವೊ
ಬೇವು ಬೆಲ್ಲವೆ
ನೋವು ಬಯಿಪ ಮಾನವ ನವ ಮುಕ್ತಾ ನೀ
ಕಾವ ನೈಯನೆ
ಕಾವ ಜೀವ ನಿನ್ನಂಘ್ರಿ ಸೇವೆ ಸಂಪದವೊ ಜಗತ್ರಯವ ||2||
ಹಡಗದೊಳಗಿಂದ ತಡಿಯದೆ ಬಂದಾ
ಕಡಗೋಲ ನೇಣ ಪಿಡಿದ ಪಡುವಲಾ
ಗಡಲ ತೀರದ ಉಡುಪಿನಲಿ ನಿಂದ
ಅಡಿಗಡಿಗೆ ಪೂಜೆ
ಬಿಡದೆ ಯತಿಗಳಿಂ
ದೊಡನೆ ಕೈಕೊಂಬ ಸಡಗರುಳ್ಳ
ಉಘಡ ವಿಜಯ ವಿಜಯವಿಠ್ಠ
ಲೊಡಿಯ ಭಕ್ತರ ಬಿರುದಿನ ಕಡು ಸಾಹಸಮಲ್ಲ||3||