ದೇವಿ ಮೀನಾಕ್ಷಿ ಮುದಂ
Category: ಶ್ರೀದೇವಿ
Author: ತಚ್ಚೂರು ಶಿಂಗರಾಚಾರ್ಯ
(ಅಂಬ) ದೇವಿ ಮೀನಾಕ್ಷಿ ಮುದಂ
ದೇಹಿ ಮೇ ಸತತಂ ||
ಪಾವನಮಧುರಾನಿಲಯೇ
ಪಾಂಡ್ಯರಾಜತನಯೇ
ಭಾವರಾಗತಾಳಾಧಿಕ-
ಪರಿತೋಷಿತ ಹೃದಯೇ ||
(ಅಂಬ) ಭಾವುಕಫಲಪ್ರದಾಯಿನಿ
ಭಕ್ತಮೋದಸಂದಾಯಿನಿ
ಸೇವಕಪಾಪವಿಮೋಚನಿ
ಶ್ರೀಕದಂಬವನವಾಸಿನಿ ||
ಹಿಮಕರನಿಭವದನೇ ವಿಮಲಕುಂದರದನೇ
ಕಮನೀಯಮಣಿಸದನೇ ರಕ್ಷಿತಮದನೇ ||
ಸುಮಶರಜನಕಸಹೋದರಿ
ಸುಂದರೇಶಹೃದಯೇಶ್ವರಿ
ಸಮರವಿಜಿತನಿಖಿಲಾಸುರಿ
ಸಾಧುವಶಂಕರಿ ಶಂಕರಿ ||
ಕಮಲಜಾದಿಸುರಪಾಲಿನಿ
ಘನತರಶುಭಗುಣಶಾಲಿನಿ
ಸಮದಾನೇಕಪಗಾಮಿನಿ
ಸಂಗೀತರಸಾಹ್ಲಾದಿನಿ ||