ದೊರಕಿತು ಧರಣಿಗೆ
Category: ಶ್ರೀಶಾರದಾದೇವಿ
Author: ಸ್ವಾಮಿ ಶಾಸ್ತ್ರಾನಂದ
ದೊರಕಿತು ಧರಣಿಗೆ ಸಿರಿವರ ಇಂದು
ಕರುಣೆಯ ಮೂರುತಿ ಶಾರದೆ ಬಂದು |
ಪರಮ ಗುರುವಿನ ಶಕ್ತಿಯ ಸಿಂಧು
ಪೊರೆವಳು ಸರ್ವರ ಹೃದಯದಿ ನಿಂದು ||
ಕಲಿಯುಗದಾರ್ತರ ನೋಡುತ ನೊಂದು
ಒಲುಮೆಯ ಸುರನದಿ ತನ್ನಲಿ ಮಿಂದು |
ಕಲುಷವ ಕಳೆಯುತ ಬೆಳಗಲಿ ಎಂದು
ಸುಲಭದ ಸಾಧನೆ ಸಾರವ ತಂದು ||
ನಿರ್ಮಲ ಮೂರುತಿ ನಿಷ್ಕಲ ಇಂದು
ಕರುಣಿಸು ಒಂದೇ ಪ್ರೇಮದ ಬಿಂದು
ಪರಹಿತ ಜೀವಿತೆ ಸರ್ವರ ಬಂಧು
ಮೊರೆಯುವೆ ನಿನ್ನಲಿ ಕೃಪೆ ತೋರೆಂದು ||