ಗೋದೆ ಅತಿ ಪುಣ್ಯ ಸಾಧೆ
Category: ಶ್ರೀಗಂಗೆ
Author: ವಿಜಯದಾಸ
ಗೋದೆ ಅತಿ ಪುಣ್ಯ ಸಾಧೆ
ಮಾಧವನ ಚರಣಾರವಿಂದೆ ಪಾದೆ
ಇದ್ದಲ್ಲಿ ನಿನ್ನ ಸ್ಮರಣೆಯನು ಮಾಡಲು ಪಾಪ
ಎದ್ದೋಡಿ ತಿರುಗಿ ನೋಡದೆ ಹೋಹವು
ಸದ್ಬಕ್ತಿಯಿಂದ ನಿನ್ನನು ನೋಡಬೇಕೆನುತ
ಉದ್ಯುಕ್ತವಾಗೆ ಬ್ರಹ್ಮಹತ್ಯ ಪರಿಹಾರವೊ ||1||
ಬಂದು ಹರುಷದಲಿ ಕಣ್ಣಲಿ ಕಂಡು ಶಿರವಾಗಿ
ವಂದನೆಯ ಮಾಡಿ ಸಾಷ್ಟಾಂಗೆರಗಲೂ
ಹಿಂದಣ ಶತಕೋಟಿ ದುರಿತ ರಾಸಿಗಳೆಲ್ಲ
ಒಂದು ಉಳಿಯದಂತೆ ಬೆಂದು ಹೋಹವು ||2||
ಅತಿವೇಗದಿಂದ ಬಂದು ಸ್ನಾನವನು ಮಾಡಲು
ಮತಿವಂತರನ ಮಾಡಿ ದುರ್ಮಾರ್ಗ ಬಿಡಿಸಿ
ರತಿಪತಿ ಜನಕ ಸಿರಿ ವಿಜಯವಿಠ್ಠಲನ್ನ
ಸ್ತುತಿಸಿ ಗತಿ ಪಡೆವಂತೆ ಧನ್ಯರನು ಮಾಡುವ ತಾಯಿ||3||