ಗೋಪಾಲವಿಠ್ಠಲ ನಿನ್ನ ಪೂಜೆ
Category: ಶ್ರೀಕೃಷ್ಣ
Author: ವಿಜಯದಾಸ
ಗೋಪಾಲವಿಠ್ಠಲ ನಿನ್ನ ಪೂಜೆ ಮಾಡುವೆನು
ಕಾಪಾಡೊ ಈ ಮಾತನು
ಅಪರಾ ಜನುಮದಲಿಡುವನೆ ಮ್ಯಾಲೆ
ನೀ ಪ್ರೀತಿಯನು ಮಾಡಿ ನಿಜದಾಸರೊಳಿದು
ಶ್ರುತಿಶಾಸ್ತ್ರ ಪುರಾಣ ಮಿಕ್ಕಾದ ಗ್ರಂಥಗಳ ಸತತ ಅಭ್ಯಾಸ ಮಾಡಿ
ಮಿತಿಯಿಲ್ಲದಲೆ ತೀರ್ಥಯಾತ್ರೆ ನಾನಾ
ದಾನ ವ್ರತಗಳನೆ ಬಿಡದೆ ಮಾಡಿ
ಮತಿಯಲ್ಲಿ ನಿಮ್ಮಯ ಸ್ತೋತ್ರಗಳ ಗೈದುನ್ನ
ತೋಪಾಸನಗಳನು ಮಾಡಿ
ಹಿತ ಪುಣ್ಯದಿಂದವಗುಪದೇಶವನು
ಮಾಡಿದೆನು ಚ್ಯುತಿದೂರ ನಿನ್ನ ಕೊಂಡಾಡಿದೆ ||1||
e್ಞÁನವೆ ಭಕುತರಿಗೆಯಿತ್ತು ಯಥಾರ್ಥದಲಿ
ಕ್ಷೋಣಿಯೊಳಗೆ ನಡಿಸುತ
ಮಾನವರೊಳಗಿದ್ದು ವಿಚಿತ್ರವನು ತೋರಿ
ಮೇಣು ಧನ್ಯನ್ನ ಮಾಡು
ಮಾಣದಲೆ ಈ ಪರಿ ಕೀರ್ತಿ ತುಂಬಿರಲಾಗಿ
ಧ್ಯಾನದಲಿ ಅಮರರಿಗೆ ಬೆಡಗುಗೊಳಿಸುವ ದೇವಾ||2||
ಅಂಕಿತವ ನಾನಿತ್ತೆ ನಿನ್ನ ಪ್ರೇರಣೆಯಿಂದ
ಕಿಂಕರಗೆ ಲೌಕಿಕದ ಡೊಂಕು ನಡತೆಯ ಬಿಡಿಸಿ
ಮಂಕು ಜನುಮ ಜನುಮದಲ್ಲಿದ್ದ ಪಂಕವಾರವ ತೊಲಗಿಸಿ
ಶಂಕೆ ಪುಟ್ಟದಂತೆ ಕಾವ್ಯಗಳ ಪೇಳಿದದು
ಸಂಕಟಗಳಟ್ಟಿಥಾರಿಗೆ ವೆಂಕಟ ಕೃಷ್ಣನು
ನೀನೆ ವಿಜಯವಿಠ್ಠಲಯೆಂದು
ಅಂಕುರವ ಪಲೈಸಿ ಫಲಪಾಪ್ತಿಯಾಗದೊ||3||