ಚರಣವ ತೋರೈ ಚಲುವರಸನೇ
Category: ಶ್ರೀಕೃಷ್ಣ
Author: ವಿಜಯದಾಸ
ಚರಣವ ತೋರೈ ಚಲುವರಸನೇ
ಚರಣವ ತೋರೈ
ಸ್ಮರಣೆಮಾತ್ರದಲಿ ಮುಕುತಿಯ ಕೊಡುವ ಚರಣವ ತೋರೈ
ರಮ್ಮೆಯ ಮನಕೆ ಬೆಡಗು ತೋರುವ ಚರಣ
ಬೊಮ್ಮಾದಿಗಳ ಮನಕೆ ನಿಲುಕದ ಚರಣವ ತೋರೈ
ಚಿಮ್ಮಿ ರಾವಣನ ಬಲು ದೂರಗೈದ ಚರಣವ ತೋರೈ
ಘಮ್ಮನೆ ಮೊಸರು ಮೆದ್ದು ಓಡುವ ಚರಣ ತೋರೈ ||1||
ಗೋಕುಲ ಭೂಮಿಯ ಪಾವನ ಮಾಡಿದ ಚರಣವ ತೋರೈ
ಲೋಕವನೆಲ್ಲಾ ಅಡಗಿಸಿಕೊಂಡಾ ಚರಣವ ತೋರೈ
ಬೇಕೆಂದು ಕುಬುಜಿಯ ಮನೆಗೆ ಪೋದ ಚರಣವ ತೋರೈ
ನೂಕಿ ಭವಾಬ್ಧಿ ಬತ್ತಿಸಿ ಬಿಡುವಾ ಚರಣವ ತೋರೈ ||2||
ಬಿಡದಲೆ ಸರ್ವಜ್ಞತೀರ್ಥರಿಗೊಲಿದಾ ಚರಣವ ತೋರೈ
ಬಡವರಾಧಾರ ದಿವ್ಯಭೂಷಣವಿಟ್ಟು ಚರಣವ ತೋರೈ
ಕಡು ಮುದ್ದು ಸಿರಿಕೃಷ್ಣ ವಿಜಯವಿಠ್ಠಲ ನಿನ್ನ ಚರಣವ ತೋರೈ
ಉಡುಪಿಯ ಸ್ಥಳದಲಿ ನಿಂದು
ಪೂಜೆಯಗೊಂಬ ಚರಣವ ತೋರೈ||3||