ಚಿಂತೆ ಮಾಡುವುದ್ಯಾಕೆ ಮನವೆ ನೀನು
Category: ವೈರಾಗ್ಯ
Author: ವಿಜಯದಾಸ
ಚಿಂತೆ ಮಾಡುವುದ್ಯಾಕೆ ಮನವೆ ನೀನು
ಪಿಂತೆನ್ಯೆಸಗಿದ ಕರ್ಮ ಎಂದಿಗಾದರೂ ಬಿಡದು
ಮಗನಾರು ನೀನಾರು ಪೇಳೊ ಸಿದ್ಧ
ನಿಗಮಾರ್ಥಗಳಿಂದ ಸಜ್ಜನರ ಕೇಳೊ
ತಗಿದು ಕಳಿ ಶೋಕದ ಗೋಳು ನಿತ್ಯ
ನಗಧರನ ಭಕ್ತಿಯಲಿ ಸುಖದಲ್ಲಿ ಬಾಳೋ ||1||
ಸಾಹನಶಕ್ತಿಯನ್ನು ಮಾಡೊ ಬರಿದೆ
ಸ್ನೇಹ ಮಾಡಿದರಿಂದ e್ಞನಕ್ಕೆ ಕೇಡು
ತಾಹಾದು ಸ್ಥಿರವೆಂದು ನೋಡೊ ನೀನೂ
ಮಾಹಪದವಿಗೆ ಬಂದೆ ಸುದೃಢವೆ ಬೇಡು||2||
ವಿರಕ್ತಿ ತೊಡು ತೊಡು ಬಿಡದೆ ಎಂದು
ಸಾರಿದೆ ಪೇಳಿ ಧರ್ಮದಲಿನ್ನು ನುಡಿದೆ
ವಾರವಾರಕೆ ಹೀಗೆ ಕೆಡದೇ ಶ್ರಿಂ
ಗಾರ ಶ್ರೀ ವಿಜಯವಿಠ್ಠಲಲೆನ್ನು ದು:ಖಬಡದೆ ||3||