ಚಿಂತೆಯಾತಕೆ ಮನವೆ ನಿನಗಿದು
Category: ಶ್ರೀಕೃಷ್ಣ
Author: ವಿಜಯದಾಸ
ಚಿಂತೆಯಾತಕೆ ಮನವೆ ನಿನಗಿದು ಸತತ ಸಲ್ಲದು ಕಾಣೊ
ನಿಂತು ಪುರಂದರ ದಾಸರನುದಿನ ಇಂತು ಬಗೆಯಲಿ ಪಾಲಿಸೊ
ಅಗ್ರ ಬುದ್ಧಿಯ ತಾಳು ನಿನಗೆ ಸಾ
ಮಗ್ರಿ ಆಲೋಚನಿ ಯಾತಕೆ ಸ
ಮಗ್ರ ಸೋಪಸ್ಕರವನು ಅನುಗ್ರಹವನು ಮಾಡುತಾ
ಉಗ್ರ ಮನುಜರ ಕೂಡಿಸದೆ ಪಾ
ಣಿಗ್ರಹ ಮಾಡಿಪ (ರಾವ) ಗವುಗಾದರೂ
ಅಂದು ಪೊಗಳಲು ಶೀಘ್ರದಲಿ ನಿಂದಿಹರೊ ||1||
ಹರಿಗುರುಗಳ ಸಂಕಲ್ಪ ತಪ್ಪದು
ಗಿರಿಗಹ್ವರದೊಳಗಿದ್ದರು ಅದು
ಬರಿದೆಯಾಗದು ಕೇಳು ಸ್ಮರಿಸಿ ಬಳಲಿ ನಲಿದಾಡಿ
ಸುರ ನರೋರುಗ ಏಕತ್ರಗಳ ಮಾಡಿ ಶರಣರಿಂದಾಳಿಸುವ ನಿಶ್ಚಯ
ಪರಿದ ಕಾಲಕೆ ಬಿಡದೆ ಅಹಿಕದ ಚರಿತೆ ಅವರಿಗೆ ಗಣಣೇನೊ||2||
ತೆತ್ತಗಿನ ಸ್ವಭಾವ ಆವದೊ ಎತ್ತಲಟ್ಟಿದರತ್ತ ತೊಲಗದೆ
ಹೊತ್ತುಹೊತ್ತಿಗೆ ಪೋಗಿ ಬಾಗಿ ತೊತ್ತಿನಂದದಿ ಪ್ರಯೋಜನ
ಹೊತ್ತು ಮೀರದೆ ಮಾಳ್ಪುದು ಧರ್ಮ
ಮೊತ್ತವಲ್ಲದೆ ಇನ್ನೊಂದಿಲ್ಲವೊ
ಇತ್ತ ಭಾಗ್ಯವಿತ್ತ ನಿರ್ಮಳ ಚಿತ್ತದಲಿ ಅರ್ಪಿಸುತಿರು||3||
ನೀನು ಮಾಡಿದ ಪುಣ್ಯಗಳಿಗೆ ತಾ ನಡದು ಬರುವುದೇ ಮರುಳೆ
ನಾನಾ ಪರಿಯಲಿ ತಿಳಿದು ನೋಡು
ಧ್ಯಾನದಿಂದಲಿ ದಿನಪ್ರತಿ e್ಞನನಿಧಿ ನಿಜಗುರು
ಶಿರೋಮಣಿ ಅನಂತಾನಂತ ಜನುಮದಲೀಗ
ಗಾನಮಾಡಿದ ನಿಷ್ಟ ಪುಣ್ಯವು ತಾನೊಲಿದು ಫಲವಿತ್ತದೋ||4||
ಕಲ್ಲು ಕರಗಿಸಿ ಬೆಣ್ಣಿ ತೆಗುವಂಥ ಬಲ್ಲಿದರು ನಿನ
ಗೊಲಿದಿರಲು ಎಲ ಎಲ್ಲಿ ಇಲ್ಲವೆಂಬೊ
ಸೊಲ್ಲುಗಳಲ್ಲದೆ ಇದು ಸಲ್ಲದೊ
ಎಲ್ಲಿ ಇದ್ದರು ನಿನ್ನ ಬಳಿಯಲ್ಲಿ ಸಲ್ಲುತಿಪ್ಪದೊ
ಸಕಲ ಮನೋಭೀಷ್ಟಾ
ತುಲ್ಯ ವಲ್ಲಭ ಮಲ್ಲದಲ್ಲಣ ನಿಲ್ಲದಲೆ ವೊಲಿದಿಹನೊ ||5||
ನೂನ್ಯಪೂರ್ಣವು ಅವರನ ಕೂಡಿ
ತನ್ನ್ಯೋಪಾಯವು ಯಾಕೆ ನಿನಗೆ
ಅನನ್ಯನಾಗಿರು ಆತ ನಿನಗೆ ರಾಜೆಂದು
ಕಣ್ಣೆವೆ ಇಡುವನಿತರೊಳು ಕಾರುಣ್ಯವರುಷಗರೆದು ಬಿಡುವ
ದೈನ್ಯವೃತ್ತಿಯ ಬಿಡಿಸಿ ನಿಷ್ಕಾಮ ಪುಣ್ಯವನಧಿಯೊಳಿಡುವರೊ ||6||
ಊರ್ವಿಗೀರ್ವಾಣರಿಗೆ ಉಣಿಪುದು
ಗರ್ವವನು ತಾಳದಲೆ ಚೆನ್ನಾಗಿ
ಸರ್ವಬಗೆಯಲಿ ನಾನು ಎಂಬೊ ದುರ್ವಚನಗಳ ನುಡಿಯದೆ
ಪೂರ್ವೂತ್ತರವನು ತಿಳಿದು ಸರ್ವದ
ಪೂರ್ವತನೆ ಬಯಸುತಾರಾಧಿಸು
ಶರ್ವಸನ್ನುತ ವಿಜಯವಿಠ್ಠಲ ಪೂರ್ವನೆಂತ ಪ್ರಬಲನೆ||7||