ಚಿನ್ಮಯ ಚಿದಾನಂದ ನೀನೆ

Category: ಶ್ರೀಕೃಷ್ಣ

Author: ವಿಜಯದಾಸ

ಚಿನ್ಮಯ ಚಿದಾನಂದ ನೀನೆ
ಸನ್ನುತಾಂಗಿಯ ರಮಣ ಸಕಲ ಲೋಕಕೆ ಕರುಣ

ಭೃಗು ಮುನಿಪ ಹರಿಹರಾ ಹಿರಣ್ಯಗರ್ಭಾ
ದಿಗಳ ವೆಗ್ಗಳವ ನೋಡಲಿ ಬಂದ್ಯೋ
ಮಿಗಿಲಾದ ಪರದೈವ ಹರಿಯೆಂದು ಕೊಂಡಾಡೆ
ಗಗನ ವಾಸಿಗಳು ಪೂಮಳೆಗರಿಯೆ ಹರುಷದಲಿ ||1||

ಮಡುವಿನೊಳ್ ಕರಿರಾಜ ಸಿಕ್ಕಿ ಸಾವಿರದ ವರುಷ
ಬಿಡದೆ ನಕ್ರನ ಕೂಡ ಕಾದಿ ಸೋತು
ಒಡಿಯರಾರುಂಟೆ ತ್ರಿಮೂರ್ತಿಗಳೊಳಗೆನಲು
ಮೃಡನಜರು ಬೆರಗಾಗಿ ಸಾಮಜನ ಪಾಲಿಸಿದೆ ||2||

ಸೃಷ್ಟಿಜಲ ಮುಸುಕಿ ಬ್ರಹ್ಮಾಂಡ ಪ್ರಳಯಕಾಲದಲಿ
ನಿಟಿಲಾಕ್ಷ ಮೊದಲಾದ ದೇವತೆಗಳು
ಜಠರದೊಳು ಜಗಕರ್ತುನೆಂದೆನಿಸಿದೆ
ವಟಪತ್ರಶಯನ ಸಿರಿವಿಜಯವಿಠ್ಠಲರೇಯಾ||3||